ಎಲ್ಲರಿಗೂ ನಮಸ್ಕಾರ,
ನನ್ನ ಹೆಸರು ಮಹೇಶ್ ಬಾಬು ಹೆಚ್ ಆರ್, ನಾನು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಶಾಂತಿಪುರ, ಹೆಚ್.ಡಿ.ಕೋಟೆ ತಾ|| ಮೈಸೂರು ಜಿ|| ಇಲ್ಲಿ ಸಹಶಿಕ್ಷಕ (ವಿಜ್ಞಾನ) ನಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. 2005 ನೇ ಇಸವಿಯಲ್ಲಿ ನಾನು ಶಿಕ್ಷಣ ಇಲಾಖೆಗೆ ಪಾದಾರ್ಪಣೆ ಮಾಡಿದೆ. ಮೊದಲು 5 ವರ್ಷಗಳ ಸೇವೆಯನ್ನು ಚಾಮರಾಜನಗರ ಜಿಲ್ಲೆ ಹಾಗೂ ತಾಲೂಕಿನ ಕೋಳಿಪಾಳ್ಯ ಎಂಬ ಗ್ರಾಮದಲ್ಲಿ ಸಲ್ಲಿಸಿದೆ. ನಂತರ 6 ವರ್ಷಗಳ ಸೇವೆಯನ್ನು ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಕಾಡನೂರು ಎಂಬಲ್ಲಿ ಸಲ್ಲಿಸಿದೆ. ಪ್ರಸ್ತುತ ಮೈಸೂರು ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ.

ಇಂದಿನ ಈ ಪ್ರಪಂಚದಲ್ಲಿ ಕಂಪ್ಯೂಟರ್ ಸಾಕ್ಷರತೆ ತುಂಬಾ ಅತ್ಯವಶ್ಯವಾಗಿದೆ. ದಯಮಾಡಿ ಎಲ್ಲರೂ ಕಂಪ್ಯೂಟರ್ ಸಾಕ್ಷರರಾಗಬೇಕಾಗಿ ಕೇಳಿಕೊಳ್ಳುತ್ತೇನೆ. ಕಂಪ್ಯೂಟರ್ ಅಕ್ಷರಸ್ಥರಾಗುವುದರಿಂದ ನಾವು ಸಾಕಷ್ಟು ಅನುಕೂಲಗಳನ್ನು ಪಡೆದುಕೊಳ್ಳಬಹುದು. ಕಡಿಮೆ ಸಮಯದಲ್ಲಿ ಹೆಚ್ಚಿನ ಕೆಲಸವನ್ನು ನಿಭಾಯಿಸ ಬಹುದಾಗಿದೆ.
ಪ್ರಸ್ತುತ ಶಿಕ್ಷಣ ಇಲಾಖೆಯಲ್ಲಿ ನಡೆಸುತ್ತಿರುವ ತರಬೇತಿಗೆ ಕಂಪ್ಯೂಟರ್ ಅಕ್ಷರಸ್ಥರಾಗುವುದು ಅತ್ಯವಶ್ಯ. ಸಂಪನ್ಮೂಲ ವ್ಯಕ್ತಿಗಳು ಶಿಕ್ಷಕರ ಹಾಜರಾತಿ, ಮೌಲ್ಯಮಾಪನ ಎಲ್ಲವನ್ನೂ ಕೂಡ ಆನ್‍ಲೈನ್ ನಲ್ಲಿ ನಮೂದಿಸಬೇಕಾಗಿರುತ್ತದೆ. ಇದಕ್ಕೆ ಸಂಬಂಧಿಸದಂತೆ ಹಲವು ವಿಷಯಗಳ ಕುರಿತು ಈ ಬ್ಲಾಗ್ ನಲ್ಲಿ ಮಾಹಿತಿ ನೀಡುತ್ತೇನೆ. ದಯಮಾಡಿ ಈ ಬ್ಲಾಗನ್ನು ಅನುಸರಿಸಿ.
ನಾನು ಟಿ.ಟಿ.ಎಂ.ಎಸ್ ನಲ್ಲಿ ಹೆಲ್ಪ್ ಡೆಸ್ಕ್ ಸದಸ್ಯನಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಮೈಸೂರು ವಿಭಾಗದ 8 ಜಿಲ್ಲೆಗಳ ಸಮಸ್ಯೆಗಳಿಗೆ ನಾನು ಸ್ಪಂದಿಸಲು ಸದಾ ಸಿದ್ದನಿದ್ದೇನೆ. ತಂತ್ರಾಂಶಕ್ಕೆ ಸಂಬಂಧಿಸಿದಂತೆ ಯಾವುದೇ ಮಾಹಿತಿ ಬೇಕಾದಲ್ಲಿ 8277 8105 38 ಈ ಸಂಖ್ಯೆಗೆ ಕರೆ ಮಾಡಬಹುದು.
Impossible = I m Possible
Everything is possible in this world. Unless we try, we cann't achieve anything.
No comments:
Post a Comment